ಸನಾತನ ಬೇರಿನ ತತ್ವಗಳ ಮರುರೂಪ..!

 ಸನಾತನ ಬೇರಿನ ತತ್ವಗಳ ಮರುರೂಪ..!

ಮೊಟ್ಟ ಮೊದಲಿಗೆ ಸ್ವಾಮಿ ವಿವೇಕಾನಂದರ ಜೀವನದಲ್ಲಿ ನಡೆದ ಘಟನೆಯತ್ತ ಒಮ್ಮೆ ಕಣ್ಣು ಹಾಯಿಸೋಣ

ಸ್ವಾಮೀಜಿಯವರು ಗೋಪಾಲಲಾಲ್ ಸೀಲರ ಉದ್ಯಾನಗೃಹದಲ್ಲಿದ್ದಾಗ ಒಮ್ಮೆ ಕೆಲವು ಗುಜರಾತೀ ಪಂಡಿತರು ಅಲ್ಲಿಗೆ ಬಂದರು. ವೇದವೇದಾಂಗಗಳಲ್ಲಿ ಪಾರಂಗತರಾದ ಪಂಡಿತರು ಸ್ವಾಮೀಜಿಯವರೊಂದಿಗೆ ಶಾಸ್ತ್ರವಿಚಾರಗಳ ಚರ್ಚೆ ಮಾಡಲು ಬಂದಿದ್ದರು. ಇವರು ಸಂಸ್ಕ್ರತದಲ್ಲಿ ಚರ್ಚೆಯನ್ನು ಪ್ರಾರಂಭಿಸಿದರು. ಸ್ವಾಮೀಜಿ ತಮ್ಮೊಂದಿಗೆ ಸಂಸ್ಕ್ರತದಲ್ಲಿ ವ್ಯವಹರಿಸಬಲ್ಲರೇ ಎಂಬುದನ್ನು ಬಯಲಿಗೆಳೆದು ತಮಾಷೆ ನೋಡುವುದು ಇವರ ಒಳ ಉದ್ದೇಶ. ಆದರೆ ಸ್ವಾಮೀಜಿ ಶಾಂತವಾಗಿ ಸಂಸ್ಕ್ರತದಲ್ಲಿ ನಿರರ್ಗಳವಾಗಿ ಸಂಭಾಷಿಸತೊಡಗಿದರು. ಇದನ್ನು ಕಂಡು ಅಲ್ಲಿದ್ದ ಇತರ ಸನ್ಯಾಸಿಗಳಿಗೂ ಪರಮಾಶ್ಚರ್ಯ

 ಸ್ವಾಮೀಜಿಯವರು ವಾದದಲ್ಲಿ ಸೋಲಬಾರದೆಂದು ಅಲ್ಲಿದ್ದ ಸ್ವಾಮಿ ರಾಮಕೃಷ್ಣಾನಂದರು ಮೌನವಾಗಿ ಪ್ರಾರ್ಥನೆ ಮಾಡುತ್ತಾ ಕುಳಿತರು

ಸ್ವಾಮೀಜಿಯವರ ಸಂಸ್ಕ್ರತ ಶೈಲಿ ಪಂಡಿತರ ಶೈಲಿಗಿಂತ ಹೆಚ್ಚು ಸಾಹಿತ್ಯಪೂರ್ಣವಾಗಿತ್ತು,ಮತ್ತು ಅವರ ಮಧುರ ಕಂಠದಿಂದಾಗಿ ಅದು ರಸಮಯವಾಗಿತ್ತು. ಪಂಡಿತರ ಪ್ರಶ್ನೆಗಳಿಗೆಲ್ಲ ಸ್ವಾಮೀಜಿ ಅಡೆತಡೆಯಿಲ್ಲದೆ ಉತ್ತರಿಸಿ ತಮ್ಮ ಅಭಿಪ್ರಾಯಗಳನ್ನು ಸ್ಪಷ್ಟವಾಗಿ ಮಂಡಿಸಿದರು. ಆದರೆ ಮಧ್ಯೆ ಅವರು ಅಸ್ತಿ ಎನ್ನುವುದರ ಬದಲು ಬಾಯಿತಪ್ಪಿ ಸ್ವಸ್ತಿ ಎಂದು ಬಿಟ್ಟರು. ಇದೊಂದು ತೀರಾ ಕ್ಷುಲ್ಲಕವಾದ ತಪ್ಪು .ಆದರೆ ಇಂಥದಕ್ಕಾಗಿಯೆ ಕಾದಿದ್ದ ಪಂಡಿತರು ತಕ್ಷಣ ಚಪ್ಪಾಳೆ ತಟ್ಟಿ ಗಟ್ಟಿಯಾಗಿ ನಕ್ಕುಬಿಟ್ಟರು. ಪಂಡಿತರ ಅಲ್ಪತನವನ್ನು ಕಂಡೂ ಸ್ವಾಮೀಜಿ ಸಿಟ್ಟಿಗೇಳದೆ ತಕ್ಷಣ ತಮ್ಮ ದೋಷವನ್ನು ಸರಿಪಡಿಸಿಕೊಂಡರು. ಬಳಿಕ ಕೈ ಮುಗಿಯುತ್ತಾ ಪಂಡಿತಾನಾಂ ದಾಸೋಹಂ ಕ್ಷಂತವ್ಯಂ ಸ್ಖಲನಂ ಮಮ ಎಂದರೆ ಪಂಡಿತರ ದಾಸ ನಾನು, ನನ್ನ ತಪ್ಪನ್ನು ಮನ್ನಿಸಬೇಕು ಎಂದರು.

ಅವರ ವಿನಯವನ್ನು ಕಂಡು ಪಂಡಿತರಿಗೇ ಮುಖಭಂಗವಾದಂತಾಯಿತು

ಅಂದಿನ ಚರ್ಚೆಯ ಮುಖ್ಯ ವಿಷಯ ಪೂರ್ವ ಮೀಮಾಂಸೆ ಮತ್ತು ಉತ್ತರ ಮೀಮಾಂಸೆಗಳ ಸ್ಥಾನಮಾನವನ್ನು ಕುರಿತದ್ದು‌. ಪೂರ್ವ ಮೀಮಾಂಸೆಯೆಂದರೆ ಕರ್ಮಕಾಂಡ.ಯಾವ ಬಗೆಯ ಸ್ವರ್ಗವನ್ನು ಪಡೆಯಲು ಎಂತಹ ಕರ್ಮವನ್ನು ಮಾಡಬೇಕು. ಯಾವ ಬಗೆಬಗೆಯ ಪ್ರಾಯಶ್ಚಿತ್ತಕ್ಕೆ ಯಾವ ಕರ್ಮವನ್ನು ಕೈಗೊಳ್ಳತಕ್ಕದ್ದು ಎಂಬಂತಹ ವಿವರಗಳಿಂದ ಕೂಡಿದ್ದು ಕರ್ಮಕಾಂಡ ಅಥವಾ ಪೂರ್ವ ಮೀಮಾಂಸೆ

ಉತ್ತರ ಮೀಮಾಂಸೆಯೆಂದರೆ ಜ್ಞಾನಕಾಂಡ ,ಎಂದರೆ ಆತ್ಮಜ್ಞಾನವನ್ನು ಬೋಧಿಸುವಂತಹ ಉಪನಿಷತ್ತುಗಳಿಂದ ಕೂಡಿದುದು. ಕರ್ಮಕಾಂಡವೇ ವೇದಗಳ ಅತಿಮುಖ್ಯ ಭಾಗ ಎಂಬುದು ಪಂಡಿತರ ವಾದ. ಇದೇ ರೀತಿಯ ಅಭಿಪ್ರಾಯವನ್ನು ಪ್ರೊ!! ಮ್ಯಾಕ್ಸ್ ಮುಲ್ಲರ್ ಕೂಡಾ ವ್ಯಕ್ತಪಡಿಸಿದ್ದರು. ಆದರೆ ಅತ್ಯಂತ ಶ್ರೇಷ್ಠವಾದ ತತ್ತ್ವ ಜ್ಞಾನವನ್ನೊಳಗೊಂಡಿರುವ ಜ್ಞಾನಕಾಂಡವೇ ವೇದಗಳ ತಿರುಳು. ಕರ್ಮಕಾಂಡವು ಕೇವಲ ಮೇಲಿನ ಹೊದಿಕೆಯಂಥದು ಎಂಬುದು ಸ್ವಾಮೀಜಿಯವರ ನಿಶ್ಚಿತ ಅಭಿಮತ. ಸ್ವಾಮೀಜಿ ತಮ್ಮ ಅಪಾರ ಜ್ಞಾನದಿಂದ ಮತ್ತು ತೀಕ್ಷ್ಣವಾದ ತರ್ಕಸಾಮರ್ಥ್ಯದಿಂದ ಜ್ಞಾನಕಾಂಡದಿಂದ ಗರಿಮೆಯನ್ನು ಎತ್ತಿಹಿಡಿದಾಗ ಪಂಡಿತರು ಮಣಿಯಲೇಬೇಕಾಯಿತು.

ಕಡೆಗೆ ಅಲ್ಲಿಂದ ಹೊರಡುವಾಗ ಪಂಡಿತರು ಅಲ್ಲಿದ್ದವರೊಬ್ಬರ ಬಳಿ, ಸ್ವಾಮಿಗಳಿಗೆ ಸಂಸ್ಕ್ರತ ವ್ಯಾಕರಣದ ಮೇಲೆ ಸಂಪೂರ್ಣ ಹಿಡಿತವಿರುವಂತೆ ಕಾಣಲಿಲ್ಲ. ಆದರೆ ಅವರು ನಿಜಕ್ಕೂ ಮಹಾ ಜ್ಞಾನಿಗಳೇ ಸರಿ. ಶಾಸ್ತ್ರಗಳ ಮೇಲೆ ಅವರಿಗೆ ಅಸಾಧಾರಣವಾದ ಪ್ರಭುತ್ವವಿದೆ. ವಾದದಲ್ಲಂತೂ ಅವರು ಅಪ್ರತಿಮರು ಎಂದು ಕೊಂಡಾಡಿದರು.

 

ಪಂಡಿತರು ನಿರ್ಗಮಿಸಿದ ಮೇಲೆ ಅವರ ಅಸಭ್ಯ ನಡವಳಿಕೆಯ ಬಗ್ಗೆ ಪ್ರಸ್ತಾಪಿಸಿ ಸ್ವಾಮೀಜಿ ಹೇಳಿದರು, ಸುಸಂಸ್ಕೃತ ಪಾಶ್ಚಾತ್ಯ ಸಮಾಜದಲ್ಲಿ ಇಂತಹ ವರ್ತನೆಯನ್ನು ಯಾರೂ ಸಹಿಸುವುದಿಲ್ಲ. ಅಲ್ಲಿ ಪ್ರತಿವಾದಿಯ ಮಾತಿನ ಭಾವದ ಕಡೆಗೆ ಗಮನ ಕೊಡುತ್ತಾರೆಯೇ ಹೊರತು ಹೀಗೆ ಮಾತಿನಲ್ಲಿ ವ್ಯಾಕರಣ ದೋಷಗಳನ್ನು ಹುಡುಕಿ ಅಪಹಾಸ್ಯ ಮಾಡುವುದಿಲ್ಲ. ನಮ್ಮ ಪಂಡಿತರುಗಳು ಯಾವುದೋ ಅಕ್ಷರ ವ್ಯತ್ಯಾಸವನ್ನೇ ಹಿಡಿದು ಜಗ್ಗಾಡುತ್ತಾ ಮುಖ್ಯಾಂಶವನ್ನೇ ಮರೆತುಬಿಡುತ್ತಾರೆ.

ಹೊರಗಿನ ಹೊಟ್ಟನ್ನು

ಹಿಡಿದು ಹೋರಾಡುತ್ತಾರೆ,ಒಳಗಿನ ತಿರುಳಿನ ಕಡೆಗೆ ಲಕ್ಷವೇ ಇಲ್ಲ.

ಇದೇ ಸಂಗತಿಯನ್ನೊಮ್ಮೆ ಕರ್ನಾಟಕದಲ್ಲಿ ಶರಣರ ಕುರಿತು ಮಾತನಾಡುವ ವ್ಯಕ್ತಿಗಳಿಗೊಮ್ಮೆ ಹೋಲಿಸಿ ನೋಡಿದಾಗ ಸತ್ಯಾಂಶದ ಅರಿವಾಗುತ್ತದೆ. ಪ್ರಥಮವಾಗಿವೀರಶೈವಲಿಂಗಾಯತ ಇವೆರೆಡು ಬೇರೆ ಬೇರೆ, ವೀರಶೈವವು ವೇದಾಗಮೋಕ್ತ ಧರ್ಮವಾಗಿದೆ, ಲಿಂಗಾಯತವು ಅವೈದಿಕ, ವೇದಾಗಮಗಳು, ಉಪನಿಷತ್ತುಗಳು, ವೀರಶೈವಪರವಾದ ಸೈದ್ಧಾಂತಿಕ ಸಂಸ್ಕೃತ ಮುಂತಾದ ಗ್ರಂಥಗಳು ಲಿಂಗಾಯತರಿಗೆ ಮಾನ್ಯವಲ್ಲ. ವೀರಶೈವವು ಶ್ರೀಮದ್ರೇಣುಕಾಚಾರ್ಯರಿಂದ ಸ್ಥಾಪಿಸಿದ್ದು. ಲಿಂಗಾಯತವು ಬಸವಣ್ಣನಿಂದ ಸ್ಥಾಪಿಸಿದ್ದು. ವೀರಶೈವದ ಅಷ್ಟಾವರಣ, ಪಂಚಾಚಾರ, ಷಟ್ಸ್ಥಲಗಳು ಬಸವಣ್ಣನಿಂದ ಹಾಗೂ ಚೆನ್ನಬಸವಣ್ಣನಿಂದ ಪ್ರಥಮವಾಗಿ ಬೋಧಿಸಲ್ಪಟ್ಟವುಗಳು. ರೀತಿಯಾದ ಹಲವಾರು ವಿತಂಡ ವಾದಗಳನ್ನು ಇಂದು  ಕೇಳುತ್ತಿದ್ದೇವೆ. ವೀರಶೈವವು ವೇದ ಕಾಲದಲ್ಲಿಯೇ  ಸಮಾಜದಲ್ಲಿ ಚೆನ್ನಾಗಿ ಬೇರೂರಿತ್ತು ಎಂಬುದರಲ್ಲಿ ಲವಲೇಶವೂ ಸಂಶಯವಿಲ್ಲ. ‘ವೀರಶೈವಪದವು ಒಂದು ಧರ್ಮವನ್ನು ಅದರ ತತ್ವವನ್ನು ಸಮಗ್ರವಾಗಿ ತಿಳಿಸುವ ದಾರ್ಶನಿಕ ಅರ್ಥವನ್ನು ಹೊಂದಿದೆ – 

  ‘ವಿಶಬ್ದೇನೋಚ್ಯತೇ ವಿದ್ಯಾ ಶಿವಜೀವೈಕ್ಯಬೋಧಿಕಾ |

  ತಸ್ಯಾಂ ರಮಂತೇ ಯೇ ಶೈವಾ ವೀರಶೈವಾಸ್ತು ತೇ ಮತಾಃ ||’

ವೀಎಂದರೆ ಶಿವ ಜೀವರ (ಲಿಂಗಅಂಗ ) ಐಕ್ಯವನ್ನು ಬೋಧಿಸುವ ವಿದ್ಯೆ. ಕರ್ನಾಟಕದಲ್ಲಿ ವೀರಶೈವಮತಾನುಯಾಯಿಗಳು ಬಹುಸಂಖ್ಯೆಯಲ್ಲಿದ್ದಾರೆಲೋಕರೂಢಿಯಲ್ಲಿ ಅವರನ್ನು ಲಿಂಗಾಯತ ಎಂದು ಕರೆಯಲಾಗುತ್ತಿದೆ. ಶರೀರದ ಮೇಲೆ ಯಾವಾಗಲೂ ಇಷ್ಟಲಿಂಗವನ್ನು ಧರಿಸುತ್ತಾರೆ ಎನ್ನುವ ಕಾರಣಕ್ಕಾಗಿ ಶಬ್ದ ರೂಢಿಯಾಗಿರುತ್ತದೆ. ಆದುದರಿಂದ ಇದು ರೂಢಿಗತವಾಗಿಯೇ ಹೊರತು ಶಾಸ್ತ್ರೀಯವಾದುದಲ್ಲ. ”ಯೋಗಾದ್ ರೂಢಿರ್ಬಲೀಯಸಿಎಂಬಂತೆ ರೂಢಿಗತವಾಗಿ ಬಂದಿದೆ. ಪ್ರಾಚೀನ ವೀರಶೈವದ ಶಿವಾಗಮಗಳಲ್ಲಿ, ಶ್ರೀ ಸಿದ್ಧಾಂತ ಶಿಖಾಮಣಿಯಲ್ಲಿ ಮತ್ತು ಶರಣರ ವಚನಗಳಲ್ಲಿಯೂ ಕೂಡ ವೀರಶೈವ ಎಂಬ ಪದವೇ ಧರ್ಮವಾಚಕವಾಗಿ ಪ್ರಯೋಗಗೊಂಡಿರುವುದನ್ನು ಗಮನಿಸಬೇಕಾಗಿದೆ. ಲಿಂಗಾಯತ ಶಬ್ದದ ಶುದ್ಧ ರೂಪವುಲಿಂಗಾಯತ್ತಎಂದಾಗುತ್ತದೆ. ವೀರಶೈವ ಕ್ರಿಯಾದೀಕ್ಷೆಯ ಸಂದರ್ಭದಲ್ಲಿ ಆಚರಿಸಲ್ಪಡುವ ಆಂತರಿಕ ಸಂಸ್ಕಾರಗಳಲ್ಲಿ ಆಯತ್ತ ಸಂಸ್ಕಾರವೂ ಸೇರಿಕೊಂಡಿದೆ. ಸದ್ಗುರುವು ಸಂಸ್ಕರಿಸಲ್ಪಟ್ಟ ಶಿವಲಿಂಗವನ್ನ ಶಿಷ್ಯನ ವಾಮಹಸ್ತಪೀಠದಲ್ಲಿಟ್ಟು, ನೀನು ಇಂದಿನಿಂದ ಲಿಂಗಾಯತ್ತನಾಗು ಅಂದರೆಲಿಂಗದ ಅಧೀನನಾಗುಎಂದು ಉಪದೇಶಿಸುತ್ತಾನೆ. ಆದ್ದರಿಂದ ಧರ್ಮದ ಮತ್ತು ದಾರ್ಶನಿಕ ದೃಷ್ಟಿಯಿಂದಲೂ ವೀರಶೈವ ಪದಬಳಕೆಯೇ ಉತ್ತಮವೆನ್ನಬಹುದು. ಏಕೆಂದರೆ ಧರ್ಮವಿರೋಧಿಗಳಿಗೆ ಪುನಃ ವಿಭಜಿಸಲು ನಾವೇ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಅತ್ಯಂತ ಸೂಕ್ಶ್ಮವಾಗಿ ಶರಣರ ಅಂಕಿತನಾಮಗಳನ್ನ ಗಮನಿಸಿ ನೋಡಿದರೆ, ಬಸವಣ್ಣನವರ ಕೂಡಲಸಂಗಮದೇವ, ಅಲ್ಲಮಪ್ರಭುಗಳ ಗುಹೇಶ್ವರ, ಅಕ್ಕಮಹಾದೇವಿಯವರ ಚೆನ್ನಮಲ್ಲಿಕಾರ್ಜುನ ಇತ್ಯಾದಿಗಳೆಲ್ಲವೂಪರಶಿವನಒಂದಿಲ್ಲೊಂದು ಸ್ವರೂಪದ ಕಲ್ಪನೆಯೆಂದೇ ಹೇಳಬಹುದು. ಅವರ ಪ್ರತೀ ವಚನಗಳೂ ಕೂಡ ಅನುಭಾವರೂಪಿಯೇ. ಅನುಭಾವಗಳ ಹಿಂದೆ ದೀರ್ಘ ಅಧ್ಯಯನ, ಅನುಭವ ಮತ್ತು ಗುರುಕೃಪೆ ಎಂಬುದಿದೆಯೆನ್ನುವುದನ್ನೇ ಶರಣರು ವೇದಾಗಮಗಳನ್ನು ವಿರೋಧಿಸಿದ್ದಾರೆಂದು ಹೇಳುವವರು ಮರೆತಂತಿದೆ. “ವೇದಕ್ಕೆ ಒರೆಯ ಕಟ್ಟುವೆಅಂದರೆ ಚಿನ್ನವನ್ನ ಹೇಗೆ ಉಜ್ಜಿ ನೋಡುತ್ತೇವೋ ಹಾಗೆಯೇ ವೇದವನ್ನು ಉಜ್ಜಿ ನೋಡುತ್ತೇನೆ, ಸಮಾಜಕ್ಕೆ ಅನುಪಯುಕ್ತವಾದ ಕರ್ಮಕಾಂಡಗಳನ್ನು ತಿರಸ್ಕರಿಸಿ, ಜ್ಞಾನದ ಬೆಳಕನ್ನು ಚೆಲ್ಲುವ ಅಂಶಗಳನ್ನು ವಚನದ ಮೂಲಕ ಸಾಕ್ಷಿ ಕೊಟ್ಟು ನುಡಿಯುತ್ತೇನೆ ಎಂದರ್ಥ. ಮೇಲಿನ ಸ್ವಾಮೀಜಿಯವರ ಕಥೆಯಂತೆಯೇ ಜ್ಞಾನಕಾಂಡದ ಮಹತ್ವವನ್ನು ಲೋಕಕಲ್ಯಾಣಕ್ಕಾಗಿ ಬಳಸುವ ಪ್ರಯತ್ನವನ್ನು ಮಾಡಿದ್ದಾರೆ. ಇಂದಿನ ಕೆಲ ವಿವೇಕಹೀನರು  ಮನಸೋಇಚ್ಛೆ ಇತಿಹಾಸವನ್ನು ವಿಶ್ಲೇಷಿಸಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ನಿಸರ್ಗದಲ್ಲಿ ಕಮಲವರಳುವ ಪ್ರಕ್ರಿಯೆಯ ಹಿಂದೆ ಸೂರ್ಯದೇವನ ರಶ್ಮಿಯ ಸೂಕ್ಷ್ಮತೆಯು ಹೇಗೆ ಕೆಲಸ ಮಾಡುತ್ತದೋ ಹಾಗೆಯೇ ವೀರಶೈವ ಸಮಾಜದ ಆಧ್ಯಾತ್ಮಿಕ ನೆಲೆಗಟ್ಟನ್ನು ಶರಣರಿಂದ ಹಿಡಿದು ಸಾಮಾನ್ಯರವರೆಗೂ ಗಟ್ಟಿಯಾಗಿ ಭದ್ರಗೊಳಿಸುವ ಕಾರ್ಯವನ್ನುಜಂಗಮರು‘(ಶಿವಜ್ಞಾನಿಗಳು) ಮತ್ತು ಗುರುಗಳು ಮಾಡಿದ್ದಾರೆ. ಹೀಗಾಗಿ ೧೨ನೇ ಶತಮಾನದಲ್ಲಾದ ಕ್ರಾಂತಿಯನ್ನು ಸನಾತನ ಬೇರಿನ ತತ್ವಗಳ ಮರುರೂಪವೆನ್ನಬಹುದು.

ಏಕೆಂದರೆ ಬಸವಾದಿ ಶರಣರು ಶೈವಾಗಮಗಳ ಶ್ಲೋಕಗಳನ್ನು ತಮ್ಮ ವಚನಗಳಲ್ಲಿ, ತಮ್ಮ ಮಾತಿನ ಸಮರ್ಥನೆಗೆ, ಪ್ರತಿಪಾದನೆಗೆ, ಹೇರಳವಾಗಿ ಬಳಸಿರುವುದು ಕಂಡು ಬರುತ್ತದೆ. ಶಿವಾಗಮಗಳನ್ನು ಅವರು ಶಬ್ದ ಪ್ರಮಾಣವಾಗಿ ಸ್ವೀಕರಿಸಿದ್ದು, ಅವುಗಳನ್ನು ಉಲ್ಲೇಖಿಸುವಾಗ ಕೆಲವೆಡೆ ಅವುಗಳ ಹೆಸರುಗಳನ್ನು, ಇನ್ನು ಕೆಲವೆಡೆ ಪ್ರಮಾಣ, ಸಾಕ್ಷಿ, ಇದೆಂತೆಂದಡೆ ಎಂಬ ಪದಗಳನ್ನು ಬಳಸಿದ್ದಾರೆ. ಜಂಗಮಪ್ರಸಾದದ ಮಹತ್ವವನ್ನು ತಿಳಿಸುವಾಗವೀರಾಗಮದಶ್ಲೋಕವನ್ನು ಬಸವಣ್ಣನು  ತನ್ನ ವಚನದಲ್ಲಿ ಉದಾಹರಿಸಿದ್ದಾನೆ

  “ಜಂಗಮವೇ ತನ್ನ ಪ್ರಾಣಲಿಂಗವೆಂದರಿದ ಸದ್ಭಕ್ತಂಗೆ 

   ಜಂಗಮದ ಪ್ರಸಾದವಿಲ್ಲದೆ ಲಿಂಗಪ್ರಸಾದವ ಕೊಳಲಾಗದು 

   ಜಂಗಮದ ಪ್ರಸಾದವು ಲಿಂಗಕ್ಕೆ ಸಲ್ಲದೆಂದು ಶಂಕಿಸಲಾಗದು

   ಅದೆಂತೆಂದಡೆ, ವೀರಾಗಮದಲ್ಲಿ;

   ಜಂಗಮಾಡಿ ಗುರೂಣಾಂ ಅನಾದಿಸ್ವಯಲಿಂಗವತ್ |

  ಆದಿಪ್ರಸಾದ ವಿರೋಧೇ ಇಷ್ಟೊಚ್ಚಿಷ್ಠಮ್ ತು ಕಿಲ್ಬಿಷಮ್ ||

  ಎಂಬುದಾಗಿ,

  ಪ್ರಾಣ ಭಾವದಲ್ಲಿ ಸಂಬಂಧವಾಗಿ ಇಷ್ಟಕ್ಕೂ ಸಂದಿತ್ತು.

   ಬೇಧವನರಿದು ಜಂಗಮ ಪ್ರಸಾದವಿಲ್ಲದೇ

  ಲಿಂಗದ ಪ್ರಸಾದವ ಕೊಳ್ಳಲಾಗದು, ವೀರಮಾಹೇಶ್ವರರು,

  ಕೂಡಲಸಂಗಮದೇವಾ.

ಶಿವಯೋಗಿ ಸಿದ್ಧರಾಮನು ಸುಪ್ರಭೇದಾಗಮದ ಶ್ಲೋಕಗಳನ್ನು ಉಲ್ಲೇಖಿಸಿ ಇಷ್ಟಲಿಂಗಪೂಜಾನಿಷ್ಠೆಯನ್ನು ಕುರಿತು ವಚನದಲ್ಲಿ ಹೀಗೆ ಹೇಳಿದ್ದಾರೆ.

ಅವರವರ ಲಕ್ಷ್ಯ ಭಿನ್ನವಾದಲ್ಲಿ ಫಲವೇನಯ್ಯಾ?

ತ್ರಿಷು ಲೋಕೇಷು ದೇವೇಶಿ ವೈರಾಗ್ಯಂ ಪೂಜ್ಯಮೇವ |

ತದ್ವೈರಾಗ್ಯಂ ಪ್ರೋಕ್ತಂ ಹಿ ಲಿಂಗಪೂಜಾ ಪಾವನಿ ||

ಜ್ಞಾನಲಿಂಗಮಿತಿ ಪ್ರೋಕ್ತಂ  ಕ್ರಿಯಾಯಾ ವಿಧಿರುಚ್ಯತೇ |

ದ್ವಯೋಃ ಸಂಯೋಗಮಾಪ್ನೋತಿ ಲಿಂಗಪೂಜಾ ಪ್ರಕೀರ್ತಿತಾಃ ||

ಅನೇಕ ಜನ್ಮನಃ ಪುಣ್ಯಾತ್ ಸರ್ವಸ್ಮಿನ್ ಭಕ್ತಿರುಚ್ಯತೇ |

ಸಾ ಭಕ್ತಿಃ ಪ್ರಥಮಾ ಪೂಜಾ ಲಿಂಗಾರ್ಚನಮಥೋಚ್ಯತೇ||

ಯೋ ರುಗ್ಣತ್ಯರಿಷಡ್ವರ್ಗಂ ಏವ ಲಿಂಗಸಂಭ್ರಮಃ |

ಸಮಭಾವಸ್ತು ಪೂಜಾ ಯಾ ವದಂತಿ ಮಮ ಕಿಂಕರಾಃ ||

ಲಿಂಗಾರ್ಚನಂ ತು ದೇವೇಶಿ ತ್ವಂ ಕರೋಷಿ ದಿನೇ ದಿನೇ |

ಎಂಬುದದು ಸುಪ್ರಬೇಧ ಪುಸಿಯೇನಯ್ಯಾ,

ಕಪಿಲಸಿದ್ಧ ಮಲ್ಲಿಕಾರ್ಜುನಾ.

. ಭಕ್ತ ತಾನಾದ ಬಳಿಕ ಪಂಚಮುದ್ರಗಳಿಂದಲಂಕೃತನಾಗಿರಬೇಕು.

     ಅಲಂಕಾರಿ ತಾನಾದ ಬಳಿಕ ಶಿವಮುದ್ರೆ ಶಿವಭಾವ ಅಚ್ಚೋತ್ತಿರಬೇಕು.

     “ಗುರೌ ಲಿಂಗೇಕ್ಷಮಾಲಾಯಾಂ ಮಂತ್ರೇ ಭಸ್ಮನಿ ಪಂಚಸು

      ಏತಾಸು ಶಿವಮುದ್ರಾಸು ಶಿವಸದಕ್ತಿಮಾಚರೇತ್‘ ||

       ಎಂದು ವಾತುಲಾಗಮದಲ್ಲಿ

       ಕಪಿಲಸಿದ್ಧಮಲ್ಲಿಕಾರ್ಜುನನ ವಚನವುಂಟು 

      ನೋಡಾ ಕೇದಾರಯ್ಯ  

ಬಸವೋತ್ತರ ವಚನಕಾರರಲ್ಲಿ ಸಕಲಾಗಮ ಶಿಖಾಮಣಿಯ ಕರ್ತೃವಾದ ಬಾಲಸಂಗಯ್ಯನು ತನ್ನ ಬಹಳಷ್ಟು ವಚನಗಳಲ್ಲಿ ಕೂಡ ವೇದ, ಆಗಮ, ಉಪನಿಷತ್ತು, ಸ್ಮೃತಿ, ಪುರಾಣ ಇನ್ನಿತರ ವೀರಶೈವ ಸಂಸ್ಕೃತ ಗ್ರಂಥಗಳ ಶ್ಲೋಕಗಳನ್ನು ಹೇರಳವಾಗಿ ಬಳಸಿದ್ದಾರೆ. ತಮ್ಮ ವಚನಗಳಲ್ಲಿ ಚಕ್ರಾತೀತಾಗಮ, ಚಿತ್ಪಿಂಡಾಗಮ, ಶಿವಲಿಂಗಾಗಮ, ಉತ್ತರ ವಾತುಲಾಗಮ, ಭೀಮತಂತ್ರಾಗಮ, ಮಹಾವಾತುಲಾಗಮ, ನಿಃಕಲಾತೀತಾಗಮ, ದಿವ್ಯಾಗಮ, ಮೂಲಾಗಮ, ವೀರಾಗಮ, ಉತ್ತರವೀರಾಗಮ, ಶಿವಾಗಮ ಮುಂತಾದ ಆಗಮಗಳ ಶ್ಲೋಕಗಳನ್ನು ಪ್ರಮಾಣವಾಗಿ ಸ್ವೀಕರಿಸಿ ಉಲ್ಲೇಖಿಸಿದ್ದಾರೆ. ಉದಾಹರಣೆಗಾಗಿ

 . ಆಕಾಶ ಚೈತನ್ಯಭಾವ ಕರ್ತಕ್ಷೇತ್ರಜ್ಞ ಶಿವನು ಆರು ತತ್ವಂಗಳು 

      ಅಖಂಡ ಮಹಾಜ್ಯೋತಿ ಪ್ರಣವದ ಜ್ಯೋತಿಸ್ವರೂಪವಾಗಿಹ 

      ಪರಬ್ರಹ್ಮದಲ್ಲಿ ಅಡಗಿತ್ತು ನೋಡಾ 

     ಇದಕ್ಕೆ ಮಹಾವಾತುಲಾಗಮೇ ||

     ಶಿವಕ್ಷೇತ್ರಜ್ಞ ಕರ್ತಾರಂ | ಭಾವಂ ಚೈತನ್ಯಮಂತರಂ |

     ಏವಂತು ಷಡ್ವಿಧಂ ಪ್ರೋಕ್ತಂ | ಪರಬ್ರಹ್ಮಂಚ ವಿಲೀಯತೇ ||

    ಇಂತೆಂದುದಾಗಿ, ಅಪ್ರಮಾಣ ಕೂಡಲಸಂಗಮದೇವಾ.

 . ಘ್ರಾಣ ಜಿಹ್ವೆ ನೇತ್ರ ತ್ವಕ್ಕು ಶ್ರೋತ್ರ ಚೇತನ 

      ಆರು ವಿದ್ಯಾಂಗವು ಜ್ಞಾನಶಕ್ತಿಯಲ್ಲಿ ಅಡಗಿತ್ತು ನೋಡಾ.

     ಇದಕ್ಕೆ ನಿಃಕಲಾತೀತಾಗಮೇ ||

     “ಘ್ರಾಣಂ ಜಿಹ್ವಾ ನೇತ್ರಂ || ತ್ವಕ್ ಶ್ರೋತ್ರಂ ಚೇತನವಿದುಃ|

      ಷಣ್ಣಾಂ ವಿದ್ಯಾಂಗಮೇವೇತಿ | ಜ್ಞಾನಶಕ್ತೇಷು ವಿಲೀಯತೇ ||

      ಇಂತೆಂದುದಾಗಿಅಪ್ರಮಾಣ ಕೂಡಲಸಂಗಮದೇವಾ.

ಬಸವಾದಿ ಶಿವಶರಣರು ವೇದ, ಆಗಮ, ಉಪನಿಷತ್ತುಗಳ ಮಂತ್ರಗಳನ್ನು ಸ್ವೀಕರಿಸಿ, ಪ್ರಮಾಣವಾಗಿ ನೀಡಿ ಹೇಳಿರುವ ಮೇಲಿನ ಕೆಲವು ವಚನಗಳನ್ನು ಅವಲೋಕಿಸಿದಾಗ ಅವರು ಆಚರಿಸಿದ್ದು, ಅನುಭವಿಸಿದ್ದು, ಉಪದೇಶಿಸದ್ದು ವೇದಾಗಮೋಕ್ತ ವೀರಶೈವವೇ ಹೊರತು ಯಾವುದೇ ಅವೈದಿಕ ಮತವಲ್ಲ ಎಂಬುದು ಎಂತಹ ಮಂದಮತಿಗಳಾದರೂ ಅರಿಯದೇ ಇರರು

ಶ್ರೀ ಸಿದ್ಧರಾಮಪ್ಪ ಪಾವಟೆಯವರು ವೀರಶೈವದ ಸಂಶೋಧಕರಾಗಿದ್ದು, ಅವರು ಸಹ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

“ It is the common understanding of all scholars that the hindu religion has its source in the Vedas, Shruties and puranas. It is not known that a class of scriptures called the shaivagamas, is the fountain – head of the Shaiva religion and philosophy. Which religion and philosophy are expanded by the agamas as being the essence of the teachings of the Vedas themselves. This ignorance has given rise to two mis-conceptions and has been the source of a belief that the Vedas have taught only the philosophy of Shankara, Ramanuja, and Madhva and that the teachings of Basava were opposed to the Vedas and so to say are a protest against the Vedic religion. True it is that some European scholars and antiquarians recognize the merit of the teachings of Basava and admire the broad sympathy of his heart and wide sphere of the social reforms affected by him. Yet, these also think that Basava broke off from the orthodox Vedic principles. The present essay is an attempt, though an humble one, to remove these misconceptions and show that the lingayat religion as taught by Basava has it’s beginning in the time past and is equally old and consistent with the Vedas. 

ವೀರಶೈವ ಧರ್ಮತತ್ವಗಳನ್ನು ಶರಣರು ತಮ್ಮ ವಚನಗಳಲ್ಲಿ ಸ್ಪಷ್ಟವಾಗಿ ತೋರ್ಪಡಿಸಿದ್ದಾರೆ

ಉದಾಹರಣೆಗೆಬಸವಣ್ಣನು 

    ” ಅಂಗಲಿಂಗ ಸಂಗ ಸುಖ ಸಾರಾಯದನುಭಾವ 

      ಲಿಂಗವಂತಂಗಲ್ಲದೇ ಸಾಧ್ಯವಾಗದು ನೋಡಾ 

      ಏಕಲಿಂಗ ಪರಿಗ್ರಾಹಕನಾದ ಬಳಿಕ ಲಿಂಗ ನಿಷ್ಠೆ ಗಟ್ಟಿಗೊಂಡು 

       ಸ್ವಯಲಿಂಗಾರ್ಚನೋಪಚಾರ ಅರ್ಪಿತ ಪ್ರಸಾದಭೋಗಿಯಾಗಿ

       ವೀರಶೈವಸಂಪನ್ನನೆನಿಸಿ ಲಿಂಗವಂತನಾದ ಬಳಿಕ 

       ತನ್ನಂಗಲಿಂಗಸಂಬಂಧಕ್ಕನ್ಯವಾದ ಜಡಭೌತಿಕ ಪ್ರತಿಷ್ಠೆಯನುಳ್ಳ

       ಭವಿಶೈವದೈವಕ್ಷೇತ್ರ ತೀರ್ಥಂಗಳಾದಿಯಾದ ಹಲವು ಲಿಂಗಾರ್ಚನೆಯ 

       ಮನದಲ್ಲಿ ನೆನೆಯಲಿಲ್ಲ, ಮಾಡಲೆಂತೂ ಬಾರದು

       ಇಷ್ಟೂ ಗುಣವಳವಟ್ಟಿತ್ತಾದಡೆ 

       ಆತನೀಗ ಏಕಲಿಂಗ ನಿಷ್ಠಾಚಾರಯುಕ್ತನಾದ 

       ವೀರಮಾಹೇಶ್ವರನು 

       ಇವರೊಳಗೆ ಅನುಸರಿಸಿಕೊಂಡು ನಡೆದನಾದಡೆ 

       ಗುರುಲಿಂಗ ಜಂಗಮ ಪಾದೋದಕ ಪ್ರಸಾದ ಸದ್ಭಕ್ತಿಯುಕ್ತವಾದ 

       ವೀರಶೈವ ಷಡುಸ್ಥಲಕೆ ಹೊರಗಾಗಿ ನರಕಕ್ಕಿಳಿವನು ಕಾಣಾ 

       ಕೂಡಲಸಂಗಮದೇವಾ

      ಮತ್ತೊಂದು ವಚನದಲ್ಲಿ

      ಎನ್ನ ಬಂದ ಭವಂಗಳನು ಪರಿಹರಿಸಿ, ಎನಗೆ ಭಕ್ತಿ 

      ಘನವೆತ್ತಿ ತೋರಿ,

      ಎನ್ನ ಹೊಂದಿದ ಶೈವಮಾರ್ಗಂಗಳನತಿಗಳೆದು 

      ನಿಜ ವೀರಶೈವಾಚಾರವನರುಹಿ ತೋರಿ,

      ಎನ್ನ ಕರಸ್ಥಲದ ಸಂಗಮನಾಥನಲ್ಲಿ ಮಾಡುವ 

      ಜಪ ಧ್ಯಾನ ಅರ್ಚನೆ ಉಪಚರಿಯ ಅರ್ಪಿತ ಪ್ರಸಾದಭೋಗಂಗಳಲ್ಲಿ

      ಸಂದಿಸಿದ 

      ಶೈವಕರ್ಮವ ಕಳೆದು,

      ಭವಮಾಲೆಯ ಹರಿದು, ಭಕ್ತಿಮಾಲೆಯನಿತ್ತು,

      ಭವಜ್ಞಾನವ ಕೆಡೆಮೆಟ್ಟಿ, ಭಕ್ತಿಜ್ಞಾನವ ಗಟ್ಟಿಗೊಳಿಸಿ,

      ಭವಮಾಟಕೂಟವ ಬಿಡಿಸಿ, ಭಕ್ತಿ ಮಾಟ ಕೂಟವ ಹಿಡಿಸಿ,

      ಭವಶೇಷವನುತ್ತರಿಸಿ, ಭಕ್ತಿಶೇಷವನಿತ್ತು,

      ಎನಗೆ, ಎನ್ನ ಬಳಿವಿಡಿದು ಬಂದ ಶರಣಗಣಂಗಳೆಲ್ಲರಿಗೆ

      ಶಿವಸದಾಚಾರದ ಘನವನರುಹಿ ತೋರಿ,

      ಮರ್ತ್ಯಲೋಕದಲ್ಲಿ ಸತ್ಯಸದಾಚಾರವನು ಹರಿಸಿ, ಶಿವಭಕ್ತಿಯನುದ್ಧರಿಸಿ,

      ಕೂಡಲಸಂಗಮದೇವರಲ್ಲಿ ಚೆನ್ನಬಸವಣ್ಣ ಎನ್ನನಾಗುಮಾಡಿ

       ಉಳುಹಿದನಾಗಿ ಇನ್ನೆನಗೆ ಭವವಿಲ್ಲದೆ, ಬಂಧನವಿಲ್ಲದೆ,

      ಭಕ್ತಮಾಟಕೂಟದ ಗೊತ್ತಿನಲ್ಲಿರ್ದು ನಾನು ಚೆನ್ನಬಸವಣ್ಣನ 

      ಶ್ರೀ ಪಾದಕ್ಕೆ ನಮೋ ನಮೋ ಎಂದು ಬದುಕುವೆನು.

ಚೆನ್ನಬಸವಣ್ಣನು – 

 ಅಂಗಲಿಂಗ ನಿಜಸಂಬಂಧವನ್ನುಳ್ಳ ನಿಜವೀರಶೈವ ಸಂಪನ್ನರಾದ

 ಭಕ್ತ ಜಂಗಮಕೆ ಗುರುವೊಂದು ಲಿಂಗವೊಂದು,

  ಜಂಗಮವೊಂದು, ಪಾದೋದಕವೊಂದು,

  ಪ್ರಸಾದವೊಂದು 

  ಸತ್ಯಸದಾಚಾರ ಸತ್ಕ್ರೀ ಸಮ್ಯಜ್ಞಾನಯುಕ್ತವಾದ 

  ಸದ್ ಭಕ್ತಿ ಒಂದಲ್ಲದೇ ಭಿನ್ನವುಂಟೆ? ಇಲ್ಲವಾಗಿ,

  ಇದುಕಾರಣ ಭಕ್ತ ಜಂಗಮಕ್ಕೆ ಸತ್ಯ ಜ್ಞಾನಯುಕ್ತಪಾದ 

  ಗುರುಭಕ್ತಿ ಲಿಂಗನಿಷ್ಠಾವಧಾನ ಜಂಗಮ ವಿಶ್ವಾಸ ಪ್ರಸಾದ ಪರಿಣತೆ 

  ಭಕ್ತಾಚಾರ ವರ್ತನೆಯಿಂ ನಿಜಮುಕ್ತಿಯನೈದಲನರಿಯದೆ 

  ಅಜ್ಞಾನದಿಂದ ಅಹಂಕರಿಸಿ ಮುನ್ನ ತನ್ನ ಅನ್ವಯವಿಡಿದು ಬಂದ 

  ನಿಜಗುರುವನನ್ಯನ ಮಾಡಿ ಭಿನ್ನವಿಟ್ಟು ಕರೆವ ಕುನ್ನಿಗಳು ನೀವು ಕೇಳಿರೋ 

  ಗುರುಭಿನ್ನವಾದಲ್ಲಿ ದೀಕ್ಷೆ ಭಿನ್ನ, ದೀಕ್ಷೆ ಭಿನ್ನವಾದಲ್ಲಿ ಲಿಂಗ ಭಿನ್ನ 

  ಲಿಂಗಭಿನ್ನವಾದಲ್ಲಿ ಪೂಜೆಭಿನ್ನ,

  ಪೂಜೆ ಭಿನ್ನವಾದಲ್ಲಿ ಅರ್ಪಿತ ಪ್ರಸಾದ ಭಿನ್ನ,

  ಅರ್ಪಿತ ಪ್ರಸಾದ ಭಿನ್ನವಾದಲ್ಲಿ ಅಂಗಲಿಂಗಸಂಬಂಧವನ್ನುಳ್ಳ ನಿಜವೀರಶೈವ 

  ಷಡುಸ್ಥಲ ಆಚಾರಕ್ಕೆ ಹೊರಗಾಗಿ ನರಕಕ್ಕೆ ಇಳಿವರು.

  ಗುರುವಾಕ್ಯಂ ಮೀರಿ ಗುರುವನನ್ಯವ ಮಾಡಿ

  ಲಿಂಗವ ಭಿನ್ನವಿಟ್ಟು ಕಂಡು ಜಂಗಮವ ಜ್ಯಾತಿವಿಡಿದು ಸೇವೆ ಮಾಡಿ 

  ಪ್ರಸಾದವ ಎಂಜಲೆಂದು ಅತಿಗಳೆದು ಗುರುಮಾರ್ಗವ ತಪ್ಪಿ, ನಡೆದು

  ಗುರುಭಕ್ತಿ ಪರಾಗ್ಮುಖರಾದವರ ಭಕ್ತಜಂಗಮವೆಂದಾಧರಿಸಿ

  ಪ್ರಸಾದವ ಕೊಳಲಾಗದು ಸಲ್ಲದು ಕಾಣಾ ಕೂಡಲಚೆನ್ನಸಂಗಮದೇವಾ.

ಮತ್ತೊಂದು ವಚನದಲ್ಲಿ

ಅಯ್ಯಾ, ಆದಿಸೃಷ್ಟಿಯಿಂದ ಇಂದು ಪರ್ಯಂತರವು 

 ನಾನಾ ಯೋನಿಯಲ್ಲಿ ಹುಟ್ಟಿ ಬಳಲಿ ಬಾಯಾರಿದವಂಗೆ 

 ಅಂಧಟಿಟ್ಟಿಭ ನ್ಯಾಯದಂತೆ 

 ಅಕಸ್ಮಾತ್ ಅರಿವುಳ್ಳ ನರಜನ್ಮವು ದೊರೆವುದೆ ದುರ್ಲಭ.

 ಅದರಲ್ಲೂ ಶೈವಕುಲದಲ್ಲಿ ಜನ್ಮವೆತ್ತಿರ್ಪುದು ಅತಿದುರ್ಲಭ

 ಅದಕ್ಕಿಂತಲೂ ವೀರಶೈವ ವಂಶದಲ್ಲಿ ಜನಿಸಿಹುದು 

 ಅತ್ಯಂತ ದುರ್ಲಭವಾಗಿರ್ಪುದು ಕಾಣಾ,

  ಕಿಮಸ್ತಿ ಬಹುನೋಕ್ತೇನ ಮಾನುಷಂ ಜನ್ಮ ದುರ್ಲಭಂ |

  ತತ್ರಾಪಿ ದುರ್ಲಭಂ ಜನ್ಮ ಕುಲೇ ಶೈವಸ್ಯ ಕಸ್ಯಚಿತ್ ||

  ವೀರಶೈವಾನ್ವಯೇ ಜನ್ಮ ಪರಮಂ ದುರ್ಲಭಂ ಸ್ಮೃತಂಎಂಬುದಾಗಿ 

  ಸಕಲ ಪ್ರಾಣಿಗಳಲ್ಲಿ ವೀರಶೈವನೇ ಸರ್ವೋತ್ತಮನಯ್ಯಾ

  ಕೂಡಲ ಚೆನ್ನಸಂಗಮದೇವಾ.

ಎಂದು ಹೇಳಿ ವೀರಶೈವದ ಸರ್ವೋತ್ತಮತೆಯನ್ನು ಸಾರಿದ್ದಾನೆ.  

ಕೆಳಗಿನ ವಚನದಲ್ಲಿ ಚೆನ್ನಬಸವಣ್ಣನು ಶಿವನ ಆಜ್ಞೆಯಂತೆ ಲಿಂಗೋದ್ಭವರಾಗಿ ಭೂಮಂಡಲದಲ್ಲಿ ಅವತರಿಸಿ ವೀರಶೈವ ಧರ್ಮವನ್ನು ಸ್ಥಾಪಿಸಿದ ಶ್ರೀ ರೇಣುಕಾಚಾರ್ಯರನ್ನು ಕುರಿತು ಹೇಳಿದ್ದಾನೆ

  ಅಯ್ಯಾ ಸಾಧಕ ಸಿದ್ಧ ಅವತಾರಿಕರೆಂಬ ಗುರುಗಳು 

  ಲೋಕದ ಮಾನವರನುದ್ಧರಿಸುವ ಪರಿ ಎಂತೆಂದಡೆ;

  ತಾನು ಪರಿಪೂರ್ಣ ತತ್ವವನರಿದ ಸಾಧನದಲ್ಲಿಹನಾಗಿ 

  ಭವಿಯ ಭವಿತ್ವವ ಕಳೆದು ಭಕ್ತನ ಮಾಡುವ ಸಾಮರ್ಥ್ಯವು 

   ಸಾಧಕ ಗುರುವಿನಿಂದ ಸಾಧ್ಯವಾಗದು ನೋಡಾ 

  ಷಟ್ಸ್ಥಲಜ್ಞಾನದಲ್ಲಿ ಸಿದ್ಧನಾದ ಸದ್ಗುರು ತಾನು ನಿತ್ಯ ನಿರ್ಮಲನಾದಡೆಯೂ 

  ವೀರಶೈವ ಕ್ರಮಾಚರಣೆಯನ್ನಾಚರಿಸುತ್ತ,

  ತನ್ನ ಶಿವಭಕ್ತಿಯ ಶಕ್ತಿಯ ಬಿತ್ತರಿಸಲು 

  ಆಕಸ್ಮಾತ್ ತನ್ನ ದಿವ್ಯ ದೃಷ್ಟಿಯಿಂದ ಪರೀಕ್ಷಿಸಿ 

   ಭವಿಯ ಭವಿತ್ವವ ಕಳೆದು ಭಕ್ತನ ಮಾಡುತಿಹನು ನೋಡಾ 

  ಶಿವನು ಮತ್ತು ಶಿವನಾಣತಿಯಂ ಪಡೆದ ಪ್ರಥಮರು 

  ಗುರುರೂಪಂದಿಂ ಧರೆಗವತರಿಸಿ ಬಂದು 

  ಭವಿಭಕ್ತರೆಂಬ ಭೇಧವೆಣಿಸದೇ

  ಕ್ರಮಾಚಾರಮಂ ಮೀರಿದ ದಿವ್ಯಲೀಲೆಯಿಂದ 

  ತಮ್ಮಡಿಗೆರಗಿದ ನರರೆಲ್ಲರ ಭಕ್ತರ ಮಾಡುತ್ತಿಹರು ನೋಡಾ 

  ಇದು ಕಾರಣ, ಕೂಡಲಚೆನ್ನಸಂಗಮದೇವನ ಶರಣರು 

   ಕ್ರಮವನರಿದು ಗುರುಸೇವೆಗೈದರು.

ಶ್ರೀ ರೇಣುಕಾಚಾರ್ಯರ ಅವತಾರವನ್ನು ಕುರಿತು ಸಿದ್ಧಾಂತ ಶಿಖಾಮಣಿಯಲ್ಲಿ ಹೀಗೆ ಹೇಳಿದೆ

ಸೋಮೇಶ್ವರಾಭಿದಾನಸ್ಯ ತತ್ರ ವಾಸವತೋ ಮಮ |

  ಅಸ್ಪೃಶನ್ ಮಾನುಷಂ ಭಾವಂ ಲಿಂಗಾತ್ಪ್ರಾದುರ್ಭವಿಷ್ಯಸಿ ||

  ಮದೀಯಲಿಂಗಸಂಭೂತಂ ಮದ್ಭಕ್ತಪರಿಪಾಲಕಂ

  ವಿಸ್ಮಿತಾ ಮನುಷಾಃ ಸರ್ವೇ ತ್ವಂ ಭಜಂತು ಮದಾಜ್ಞಯಾ ||

  ಮದದ್ವೈತಪರಂ ಶಾಸ್ತ್ರಂ ವೇದ ವೇದಾಂತ ಸಂಮತಮ್ |

  ಸ್ಥಾಪಿಯಿಷ್ಯಸಿ ಭೂಲೋಕೇ ಸರ್ವೇಷಾಮ್ ಹಿತಕಾರಕಮ್ ||”

ಭೂಲೋಕದಲ್ಲಿ ಸೋಮೇಶ್ವರವೆಂಬ ಲಿಂಗವುಂಟು, ಲಿಂಗದಲ್ಲಿ ನಾನು ಸದಾಕಾಲ ವಾಸಿಸಿರುವೆನು. ಮರ್ತ್ಯರ ಸಂಪರ್ಕವಿಲ್ಲದೇ ಲಿಂಗದಲ್ಲಿ ನೀನು ಜನಿಸು, ನಿನ್ನ ದಿವ್ಯ ಜನನವನ್ನುಕಂಡು ಜನರು ಆಶ್ಚರ್ಯಚಕಿತರಾಗುವರು. ನನ್ನಾಜ್ಞೆಯಂತೆ ಅವರು ನಿನ್ನ ಸೇವೆ ಮಾಡುತ್ತಾರೆ. ಭೂಲೋಕದಲ್ಲಿ ಸಕಲರಿಗೂ ಕಲ್ಯಾಣಕರವಾದ, ವೇದಾಗಮೋಪನಿಷತ್ತುಗಳಿಗೆ ಸಮ್ಮತವಾದ ಶಿವಾದ್ವೈತ (ವೀರಶೈವ) ಸಿದ್ಧಾಂತವನ್ನು ಬೋಧಿಸುವಂತವನಾಗುಎಂದು ಕೈಲಾಸದಲ್ಲಿ ಪರಶಿವನು ಶ್ರೀ ರೇಣುಕಗಣಾಧೀಶ್ವರರಿಗೆ ಹೇಳುವನು.

ಸ್ವಾಯಂಭುವಾಗಮದಲ್ಲಿ ಶ್ರೀ ರೇಣುಕಾಚಾರ್ಯರ ಅವತಾರವನ್ನು ಹೀಗೆ ಹೇಳಿದೆ :

 ” ಶ್ರೀ ಮದ್ರೇಣುಕಾಚಾರ್ಯರೇ ಕಲಿಯುಗದಲ್ಲಿ ಶ್ರೀ ರೇವಣಸಿದ್ದರೆಂಬ ಹೆಸರಿನಿಂದ ಕುಲ್ಯಪಾಕದ ಸೋಮೇಶ್ವರ ಲಿಂಗದಲ್ಲಿ ಆವಿರ್ಭವಿಸಿ ಕದಲೀಪುರ(ಬಾಳೆಹೊನ್ನೂರು) ದಲ್ಲಿ ನೆಲೆಸಿದರು“.

 ಶಿವನಾಜ್ಞೆಯಂತೆ ಶ್ರೀ ಮದ್ರೇಣುಕಾಚಾರ್ಯರು ಭೂಮಂಡಲದಲ್ಲಿ ಅವತರಿಸಿ ವೀರಶೈವ ಪಂಚಪೀಠಗಳ ಸ್ಥಾಪನೆಯನ್ನು ಮಾಡಿರುವುದು ಸ್ವಾಯಂಭುವಾಗಮ, ಸುಪ್ರಭೇದಾಗಮ, ಪಾಶುಪತಾಗಮ, ವೀರಾಗಮೋತ್ತರ ಮುಂತಾದವುಗಳಲ್ಲಿ ವರ್ಣಿತವಾಗಿದೆ. ವೀರಶೈವದ, ಪಂಚಾಚಾರ್ಯರ, ಭವ್ಯ ಪರಂಪರೆಯನ್ನು ತಿಳಿಸುವ ಶೈವಾಗಮಗಳ ಹಾಗೂ ಸಿದ್ಧಾಂತ ಶಿಖಾಮಣಿಯನ್ನನುಸರಿಸಿ ಚೆನ್ನಬಸವಣ್ಣನುಶಿವನಾಣತಿಯಂ ಪಡೆದ ಪ್ರಥಮರು, ಗುರುರೂಪದಿಂ ಧರೆಗವತರಿಸಿ ಬಂದು ..’ ಎಂದು ಅವತಾರವನ್ನು ತಿಳಿಸಿ..ಕ್ರಮಾಚಾರಮಂ ಮೀರಿದ ದಿವ್ಯಲೀಲೆಯಿಂದ ಎಂದು ಅವರ ಅಲೌಕಿಕ ಆಚಾರಗಳಿಂದ ನರರನ್ನು ಉದ್ಧರಿಸಿದುದನ್ನು ಹೇಳಿದ್ದಾನೆ. ಇದೇ ವಚನದ ಆರಂಭದಲ್ಲಿ ಗುರುವನ್ನು ಸಾಧಕ, ಸಿದ್ಧ ಹಾಗೂ ಅವತಾರಿಕವೆಂದು ಉಲ್ಲೇಖಿಸಿದ್ದಾನೆ. ಇಂಥ ಅವತಾರಿಕ ಗುರುಗಳ ಉಪದೇಶವನ್ನು ಅರಿತು ಬಸವಾದಿ ಶರಣರು ಗುರುಸೇವೆಗೈದರು ಎಂದು  ಹೇಳುತ್ತಾನೆ.

ಲಿಂಗೋದ್ಭವರಾದ ಶ್ರೀ ಮದ್ರೇಣುಕಾಚಾರ್ಯರ ಅವತಾರವನ್ನು ಕುರಿತು ಇನ್ನೊಂದು ವಚನದಲ್ಲಿ ಹೀಗೆ ಹೇಳಿದ್ದಾನೆ.

 ಲಿಂಗದಿಂದ ಉದಯಿಸಿ ಅಂಗವಿಡಿದವರ ಇಂಗಿತವೇನೆಂಬೆನಯ್ಯಾ?

 ಅವರ ನಡೆಯೇ ಆಗಮ, ಅವರ ನುಡಿಯೇ ಪರಮಾಮೃತ

 ಅವರ ಲೋಕದ ಮಾನವರೆನಬಹುದೇ ಅಯ್ಯಾ?

 ವೃಕ್ಷಾದ್ಭವತಿ ಬೀಜಂ ಹಿ ತದ್ ವೃಕ್ಷೇ ಲೀಯತೇ ಪುನಃ |

 ರುದ್ರಲೋಕಂ ಪರಿತ್ಯಜ್ಯ ಶಿವಲೋಕಂ ಪ್ರವಿಶ್ಯತಿ ||

 ಅಂಕೋಲೆಯ ಬೀಜ ತರುವನಪ್ಪುವಂತೆ ಅಪ್ಪುವರಯ್ಯಾ

 ಕೂಡಲಚೆನ್ನಸಂಗಾ ನಿಮ್ಮ ಶರಣರು.

ಚೆನ್ನಬಸವಣ್ಣನ ಅಭಿಪ್ರಾಯವನ್ನೇ ಅಕ್ಕಮಹಾದೇವಿಯು ಕೂಡ ತನ್ನ ವಚನದಲ್ಲಿ ವ್ಯಕ್ತಪಡಿಸುತ್ತಾರೆ

   ಲಿಂಗದಿಂದುದಯಿಸಿ ಅಂಗವಿಡಿದಪ್ಪ ಪುರಾತನರ 

   ಇಂಗಿತವನೇನೆಂದು ಬೆಸಗೊಂಬಿರಯ್ಯಾ?

   ಅವರ ನಡೆಯೇ ಆಗಮ, ಅವರ ನುಡಿಯೇ ವೇದ !

   ಅವರ ಲೋಕದ ಮಾನವರೆನ್ನಬಹುದೇ?

   ಅದೆಂತೆಂದೊಡೆ 

   ಬೀಜಾದ್ಭವತಿ ವೃಕ್ಷಾಂ ತು  ಬೀಜೇತು ಲೀಯತೇ ಪುನಃ |

   ರುದ್ರಲೋಕಂ ಪರಿತ್ಯಕ್ತ್ವಾ ಶಿವಲೋಕೇ ಭವಿಷ್ಯತಿ||

   ಎಂಬುದಾಗಿ ಅಂಕೋಲೆಯ ಬೀಜದಿಂದಾಯಿತ್ತು ವೃಕ್ಷವು 

    ವೃಕ್ಷವು ಮರಳಿ ಬೀಜದೊಳಡಗಿತ್ತು !

    ಪ್ರಾಕಾರದಿಂ 

    ಲಿಂಗದೊಳಗಿದ್ದ ಪುರಾತನರು 

    ಲಿಂಗದೊಳಗೆ ಬೆರೆಸಿದರು ನೋಡಯ್ಯ !

   ಇಂತಪ್ಪ ಪುರಾತನರಿಗೆ ನಾನು ಶರಣೆಂದು 

    ಹುಟ್ಟುಗೆಟ್ಟೆನಯ್ಯಾ ಚೆನ್ನಮಲ್ಲಿಕಾರ್ಜುನ.

ಮೇಲಿನ ವಚನಗಳನ್ನು ಗಮನಿಸಿದಾಗ ಅವಲೋಕಿಸಿದಾಗ ಬಸವಾದಿ ಶರಣರು ವೇದಗಳನ್ನು, ಆಗಮಗಳನ್ನು, ಉಪನಿಷತ್ತುಗಳನ್ನು, ಪುರಾಣಗಳನ್ನು ಸ್ವೀಕರಿಸಿ, ೧೨ನೇ ಶತಮಾನದವರೆಗೆ ನಡೆದುಬಂದ ವೀರಶೈವ ಪರಂಪರೆಯನ್ನೇ ಮುಂದುವರಿಸಿ ಆಚರಿಸಿದ್ದು ಸುಸ್ಪಷ್ಟವಾಗಿ ವಿದಿತವಾಗುತ್ತದೆ. ವಚನಶಾಸ್ತ್ರದ ಕುರಿತು ಆಳವಾಗಿ ಸಂಶೋಧನೆಯನ್ನು ಮಾಡಿರುವ ಶ್ರೀ ರಂಗನಾಥ ರಾಮಚಂದ್ರ ದಿವಾಕರ್ ಅವರು -“ವಚನಶಾಸ್ತ್ರದಲ್ಲಿಯ ತತ್ವಜ್ಞಾನವಾಗಲಿ, ಸಾಧನ ಮಾರ್ಗವಾಗಲಿ, ಆಚಾರ ವಿಚಾರಗಳಾಗಲಿ ವೇದಾಗಮಗಳಿಗೆ ವಿಸಂಗತ ಇಲ್ಲವೇ ವಿರುದ್ಧವಿರುವವು ಎಂದು ಯಾರಾದರೂ ತಿಳಿದಿದ್ದರೆ ಅದೊಂದು ತೀರಾ ನಿರಾಧಾರವಾದ ತಪ್ಪು ತಿಳಿವಳಿಕೆ ಎಂದೇ ಇಲ್ಲಿ ಒತ್ತಿ ಹೇಳಬೇಕಾಗಿರುವುದು. ವಚನಕಾರರು ಸಾಕ್ಷಾತ್ಕಾರವಾದಿಗಳು. ಅಂದರೆ ಆತ್ಮಾನುಭವವೇ ಕೊನೆಯ ಮತ್ತು ಆತ್ಯಂತಿಕ ಸತ್ಯದ ಪರಮಪ್ರಮಾಣವು ಎಂದು ನಂಬುವರು, ಎಂಬುದು ನಿಜ. ಆಧಾರವೆಂದು ವೇದಾಗಮಾದಿ ಶಾಸ್ತ್ರಗಳನ್ನು ಅಲ್ಲಲ್ಲಿ ಉಲ್ಲೇಖಿಸಿರುವಂತೆ ಕೆಲವೊಂದು ಪ್ರಸಂಗಗಳಲ್ಲಿ ವೇದ, ಶಾಸ್ತ್ರ, ಆಗಮ, ಪುರಾಣಗಳನ್ನು ಜರೆದೂ ನುಡಿದಿರುವರು, ಎಂಬುದೂ ನಿಜವೇ. ಆದರೆ ಅವರ ತತ್ವಜ್ಞಾನ, ವಿಚಾರ, ಆಚಾರ, ನೀತಿ, ನಿಯಮ ಇವುಗಳನ್ನೆಲ್ಲ ನೋಡಿದರೆ ಅವರು ಶೈವಾಗಮದಿಂದ ಎಳ್ಳಷ್ಟಾದರೂ ಅತ್ತಿತ್ತ ಕದಲಿದಂತೆ ಕಂಡು ಬರುವುದಿಲ್ಲ. ಅವರು ಹೇಳಿದ ಪ್ರತಿಯೊಂದು ಪ್ರಮುಖ ಸಂಗತಿಯನ್ನು ಆಗಮಗಳಲ್ಲಿ ತೆಗೆದು ತೋರಿಸಬಹುದು. ಶೈವಾಗಮಗಳಿಗೂ, ವಚನಶಾಸ್ತ್ರಕ್ಕೂ ಇಷ್ಟು ನಿಕಟ ಸಂಬಂಧವಿರುವ ಕಾರಣವೇನೆಂದರೆ, ವಚನಕಾರರು ನಡೆದ ಮಾರ್ಗವು ಸಂಪೂರ್ಣ ಆಗಮೋಕ್ತವಾಗಿರುವುದು, ಅವರು ಪಡೆದ ಸ್ಪೂರ್ತಿಯು ಪ್ರತ್ಯಕ್ಷವಾಗಿ ಅಥವಾ ಅಪ್ರತ್ಯಕ್ಷವಾಗಿ ಆಗಮಪ್ರೇರಿತವು ಮತ್ತು ಅವರು ಸಂದರ್ಶಿಸಿದ ಸಾಕ್ಷಾತ್ಕಾರವು ಆಗಮಸಾಕ್ಷಿಯಾದುದು. ಆಗಮಗಳಲ್ಲಿ ವೇದಭಿನ್ನವಾದ ಇಲ್ಲವೇ ವೇದವಿಸಂಗತವಾದ ಹಲವು ಸಂಗತಿಗಳು ಕ್ವಚಿತ್ ಇದ್ದರೂ ಅವು ಕಲಿಯುಗಕ್ಕೆ ಸರಿಹೋಗುವಂತೆ ಮಾಡಿದ ಮಾರ್ಪಾಟುಗಳೇ ಹೊರತು ವೇದಬಾಹ್ಯ ಸಂಗತಿಗಳಲ್ಲ, ಎಂದು ಆಗಮಗಳ ಮತ್ತು ಅವುಗಳನ್ನು ಕುರಿತು ಬರೆದ ಭಾಷ್ಯಕಾರರ ಅಭಿಪ್ರಾಯವಿರುವುದು. ‘ಶೈವಸಿದ್ಧಾಂತ ಪರಿಭಾಷೆಯಲ್ಲಿ‘ “ಶ್ರೂಯತೇ ಹಿ ವೇದಸಾರಃ ಶಿವಾಗಮಃಎಂಬ ವಾಕ್ಯವು ಇದೇ ಮಾತನ್ನು ಹೇಳುತ್ತಿದೆಎಂದು ಶೈವಾಗಮಗಳಿಗೂ ಮತ್ತು ವಚನಶಾಸ್ತ್ರಕ್ಕೂ ಇರುವ ಅವಿನಾಭಾವ ಸಂಬಂಧವನ್ನು ಸ್ಪಷ್ಟವಾಗಿ ಹೇಳಿದ್ದಾರೆ. ವಚನಶಾಸ್ತ್ರದ ಕುರಿತು ಆಳವಾಗಿ ಸಂಶೋಧನೆಯನ್ನು ಮಾಡಿರುವ ಶ್ರೀ ರಂಗನಾಥ ರಾಮಚಂದ್ರ ದಿವಾಕರ್ ಅವರು -“ವಚನಶಾಸ್ತ್ರದಲ್ಲಿಯ ತತ್ವಜ್ಞಾನವಾಗಲಿ, ಸಾಧನ ಮಾರ್ಗವಾಗಲಿ, ಆಚಾರ ವಿಚಾರಗಳಾಗಲಿ ವೇದಾಗಮಗಳಿಗೆ ವಿಸಂಗತ ಇಲ್ಲವೇ ವಿರುದ್ಧವಿರುವವು ಎಂದು ಯಾರಾದರೂ ತಿಳಿದಿದ್ದರೆ ಅದೊಂದು ತೀರಾ ನಿರಾಧಾರವಾದ ತಪ್ಪು ತಿಳಿವಳಿಕೆ ಎಂದೇ ಇಲ್ಲಿ ಒತ್ತಿ ಹೇಳಬೇಕಾಗಿರುವುದು. ವಚನಕಾರರು ಸಾಕ್ಷಾತ್ಕಾರವಾದಿಗಳು. ಅಂದರೆ ಆತ್ಮಾನುಭವವೇ ಕೊನೆಯ ಮತ್ತು ಆತ್ಯಂತಿಕ ಸತ್ಯದ ಪರಮಪ್ರಮಾಣವು ಎಂದು ನಂಬುವರು, ಎಂಬುದು ನಿಜ. ಆಧಾರವೆಂದು ವೇದಾಗಮಾದಿ ಶಾಸ್ತ್ರಗಳನ್ನು ಅಲ್ಲಲ್ಲಿ ಉಲ್ಲೇಖಿಸಿರುವಂತೆ ಕೆಲವೊಂದು ಪ್ರಸಂಗಗಳಲ್ಲಿ ವೇದ, ಶಾಸ್ತ್ರ, ಆಗಮ, ಪುರಾಣಗಳನ್ನು ಜರೆದೂ ನುಡಿದಿರುವರು, ಎಂಬುದೂ ನಿಜವೇ. ಆದರೆ ಅವರ ತತ್ವಜ್ಞಾನ, ವಿಚಾರ, ಆಚಾರ, ನೀತಿ, ನಿಯಮ ಇವುಗಳನ್ನೆಲ್ಲ ನೋಡಿದರೆ ಅವರು ಶೈವಾಗಮದಿಂದ ಎಳ್ಳಷ್ಟಾದರೂ ಅತ್ತಿತ್ತ ಕದಲಿದಂತೆ ಕಂಡು ಬರುವುದಿಲ್ಲ. ಅವರು ಹೇಳಿದ ಪ್ರತಿಯೊಂದು ಪ್ರಮುಖ ಸಂಗತಿಯನ್ನು ಆಗಮಗಳಲ್ಲಿ ತೆಗೆದು ತೋರಿಸಬಹುದು. ಶೈವಾಗಮಗಳಿಗೂ, ವಚನಶಾಸ್ತ್ರಕ್ಕೂ ಇಷ್ಟು ನಿಕಟ ಸಂಬಂಧವಿರುವ ಕಾರಣವೇನೆಂದರೆ, ವಚನಕಾರರು ನಡೆದ ಮಾರ್ಗವು ಸಂಪೂರ್ಣ ಆಗಮೋಕ್ತವಾಗಿರುವುದು, ಅವರು ಪಡೆದ ಸ್ಪೂರ್ತಿಯು ಪ್ರತ್ಯಕ್ಷವಾಗಿ ಅಥವಾ ಅಪ್ರತ್ಯಕ್ಷವಾಗಿ ಆಗಮಪ್ರೇರಿತವು ಮತ್ತು ಅವರು ಸಂದರ್ಶಿಸಿದ ಸಾಕ್ಷಾತ್ಕಾರವು ಆಗಮಸಾಕ್ಷಿಯಾದುದು. ಆಗಮಗಳಲ್ಲಿ ವೇದಭಿನ್ನವಾದ ಇಲ್ಲವೇ ವೇದವಿಸಂಗತವಾದ ಹಲವು ಸಂಗತಿಗಳು ಕ್ವಚಿತ್ ಇದ್ದರೂ ಅವು ಕಲಿಯುಗಕ್ಕೆ ಸರಿಹೋಗುವಂತೆ ಮಾಡಿದ ಮಾರ್ಪಾಟುಗಳೇ ಹೊರತು ವೇದಬಾಹ್ಯ ಸಂಗತಿಗಳಲ್ಲ, ಎಂದು ಆಗಮಗಳ ಮತ್ತು ಅವುಗಳನ್ನು ಕುರಿತು ಬರೆದ ಭಾಷ್ಯಕಾರರ ಅಭಿಪ್ರಾಯವಿರುವುದು. ‘ಶೈವಸಿದ್ಧಾಂತ ಪರಿಭಾಷೆಯಲ್ಲಿ‘ “ಶ್ರೂಯತೇ ಹಿ ವೇದಸಾರಃ ಶಿವಾಗಮಃಎಂಬ ವಾಕ್ಯವು ಇದೇ ಮಾತನ್ನು ಹೇಳುತ್ತಿದೆಎಂದು ಶೈವಾಗಮಗಳಿಗೂ ಮತ್ತು ವಚನಶಾಸ್ತ್ರಕ್ಕೂ ಇರುವ ಅವಿನಾಭಾವ ಸಂಬಂಧವನ್ನು ಸ್ಪಷ್ಟವಾಗಿ ಹೇಳಿದ್ದಾರೆ.

ಬಸವಪೂರ್ವದಲ್ಲಿ ಕನ್ನಡದಲ್ಲಿ ವೀರಶೈವಸಾಹಿತ್ಯ ರಚನೆಯು ಆಗಿರಲಿಲ್ಲವೆಂದೇನಲ್ಲ. ಬಸವಣ್ಣರಿಗಿಂತ ಪೂರ್ವದಲ್ಲಿಯೇ ಜೇಡರ ದಾಸಿಮಯ್ಯ, ಕೆಂಭಾವಿ ಭೋಗಣ್ಣ, ಕೊಂಡಗುಳಿ ಕೇಶಿರಾಜ, ಮುಂತಾದ ವೀರಶೈವ ಕವಿಗಳು ವಚನಗಳನ್ನು ರಚಿಸಿದ್ದರು. ಆದರೆ ಬಸವಣ್ಣನ ಕಾಲದಲ್ಲಿ ರಾಜಾಶ್ರಯ ಮತ್ತು ಅಲ್ಲಮಪ್ರಭು, ಸಿದ್ಧರಾಮ, ಚನ್ನಬಸವಣ್ಣನಂಥ ಶರಣರ ಸಂಗದಲ್ಲಿ ಆಗಮೋಕ್ತ ವೀರಶೈವವು ಅಂದಿನ ಜನಸಾಮಾನ್ಯರ ಆಡುಭಾಷೆಯಾಗಿದ್ದ ಕನ್ನಡದಲ್ಲಿ ವಚನಗಳ ರೂಪದಲ್ಲಿ ರಚನೆಗೊಂಡು ಪ್ರಸಿದ್ಧಿಯನ್ನು ಪಡೆಯಿತು. ಅದಕ್ಕೂ ಮೊದಲು ಅಂದರೆ ೪ನೇ ಶತಮಾನದವರೆಗೆ ಸಂಸ್ಕೃತ, ಪ್ರಾಕೃತ, ಪಾಲಿ, ಮುಂತಾದ ಸಂಸ್ಕೃತ ಮೂಲದ ಭಾಷೆಗಳೇ ಆಡುಭಾಷೆಯಾಗಿದ್ದವು. ಶೈವ, ವೈಷ್ಣವ, ಕಾಳಾಮುಖ , ಪಾಶುಪತ ಮುಂತಾದ ಮತಗಳ ಸಿದ್ಧಾಂತ ಗ್ರಂಥಗಳು ಸಂಸ್ಕೃತದಲ್ಲಿಯೇ ರಚಿತವಾದರೆ ಬೌದ್ಧರ ಗ್ರಂಥಗಳು ಪಾಲಿಯಲ್ಲಿಯೂ, ಜೈನರ ಗ್ರಂಥಗಳು ಪ್ರಾಕೃತ ಭಾಷೆಯಲ್ಲಿಯೂ ರಚಿತವಾದವು. ಕನ್ನಡವು ಹೆಚ್ಚು ಪ್ರಚಲಿತದಲ್ಲಿಲ್ಲದ ಕಾಲದಲ್ಲಿ ವೀರಶೈವ ಧರ್ಮಗ್ರಂಥಗಳು ಸಹಜವಾಗಿಯೇ ಸಂಸ್ಕೃತದಲ್ಲಿ ರಚಿತವಾದವುಕನ್ನಡವು ಉದಯವಾಗಿ ಪ್ರಾದೇಶಿಕ ಭಾಷೆಯಾಗಿ ಬಳಸಿಕೊಳ್ಳುವವರೆಗೂ ಸಂಸ್ಕೃತವನ್ನು ಕುರಿತಾದ ಯಾವುದೇ ಭೇಧಾಭಿಪ್ರಾಯಗಳು ಸಮಾಜದಲ್ಲಿ ಇರಲಿಲ್ಲ. ೧೨ನೇ ಶತಮಾನದಲ್ಲಿ ಬಸವಣ್ಣ, ಚೆನ್ನಬಸವಣ್ಣ, ಸಿದ್ಧರಾಮ, ಅಲ್ಲಮಪ್ರಭು, ಅಕ್ಕಮಹಾದೇವಿ ಮುಂತಾದವರೆಲ್ಲರೂ ವೇದ, ಆಗಮ, ಶ್ರುತಿ, ಸ್ಮೃತಿ, ಮುಂತಾದವುಗಳನ್ನು ಆಳವಾಗಿ ಅಧ್ಯಯನ ಮಾಡಿದ್ದರೆಂಬುದಕ್ಕೆ ಅವರು ತಮ್ಮ ವಚನಗಳಲ್ಲಿ ಸಾಕ್ಷಿ, ಪ್ರಮಾಣ, ರೂಪದಲ್ಲಿ ಬಳಸಿದ ವೇದ, ಆಗಮ, ಶ್ರುತಿ, ಸ್ಮೃತಿ ಮುಂತಾದವುಗಳ ಸಂಸ್ಕೃತ ಶ್ಲೋಕಸಾಹಿತ್ಯವೇ ಸಾಕ್ಷಿ.

ಬಸವಣ್ಣನ ಕಾಲಕ್ಕೆ ಆಡುಭಾಷೆಯಾಗಿದ್ದ ಕನ್ನಡದಲ್ಲಿ ರಚಿಸಿದ ವಚನಸಾಹಿತ್ಯವು  ಜನಸಾಮಾನ್ಯರಿಗೂ ಅರ್ಥವಾಗುತ್ತಿದ್ದ ಕಾರಣ ಬಸವೋತ್ತರ ವೀರಶೈವವು ಅತ್ಯಂತ ಪ್ರಸಿದ್ಧಿಯನ್ನು ಪಡೆಯಿತು ಹಾಗೂ ಬಸವಾದಿ ಶರಣರು ಆಗಮೋಕ್ತ ವೀರಶೈವವನ್ನು ಅತ್ಯಂತ ಶ್ರದ್ಧೆಯಿಂದ, ತಾತ್ವಿಕವಾಗಿ ಆಚರಿಸಿದರು. ಇದರ ಪರಿಣಾಮವೇ ಅತಿಶಯೋಕ್ತಿಯಂತೆ ಬಸವಣ್ಣನೇ ವೀರಶೈವ ಧರ್ಮದ ಸ್ಥಾಪಕನೆನ್ನುವ ಮಾತು ಜನಮಾನಸದಲ್ಲಿ ಚಿತ್ರಿತವಾಗಿದೆ.

“The sect according to the tradition was founded by a set of ascetics, who are said to have been incarnation of Siva, in very old times but recognized by Basava, who was prime minister of Bijjala (1156-170) King of Kalyana in Kanara” ಡಾ. ಡಿ. .ಪೈಯವರು ಹೇಳುವ ಮಾತು ಕೂಡ ವೀರಶೈವದ ಪ್ರಾಚೀನತೆಯನ್ನು ತಿಳಿಸುತ್ತದೆ. ಹಾಗೂ ಕಾಂತಿಚಂದ್ರ ಪಾಂಡೇಯವರು ಶ್ರೀ ಜಗದ್ಗುರು ಪಂಚಾಚಾರ್ಯ ಪರಂಪರೆಯನ್ನು ತಿಳಿಸುತ್ತಾ ಲಿಂಗಧಾರಣವು ವೇದಕಾಲದಿಂದಲೂ ಪ್ರಚಲಿತದಲ್ಲಿದ್ದು ೧೨ನೇ ಶತಮಾನದಲ್ಲಿ ಬಸವಣ್ಣನಿಂದ ಅದು ಮತ್ತೆ ಉನ್ನತಿಯನ್ನ ಹೊಂದಿದುದನ್ನ ತಿಳಿಸಿರುತ್ತಾರೆ. “The religious tradition, which says that Basava was not the founder of Veerashivism but only a great exponent and upholder of it, seems to find some support in Rajashekhara’s reference to the wearing of Pranalinga on arm by a Shiva sect, as we have stated earlier and Rajashekhara belonged to 900 AD. Sripati pandita quotes from the Sadanandopanishad , which belongs to the Samajaigisiya Sakha, in justification of wearing of Pranalinga on arm. He also quotes other ancient texts including the Veda to support the wearing of linga. And lingadharana Chandrika by Nandikeshwara has as its sole aim as its tittle shows, to prove that wearing of linga is enjoyed by the Vedas, the puranas and the Shivagamas, such as Kamika etc.  Thus the literary evidence  makes us believe that the characteristic religious practices of Veerashivism go back to very much earlier period than the 12th Century AD and that Basava was a great upholder and propounder of Shiva religion and emphasized the wearing of Linga”. 

ಎಲ್ಲ ಆಧಾರಗಳಿಂದ ಅರಿಯಲ್ಪಡುವುದೇನೆಂದರೆ ೧೨ನೇ ಶತಮಾನದಲ್ಲಿ ಶರಣರುಸನಾತನ ಬೇರಿನ ತತ್ವಗಳಿಗೆ ಮರುರೂಪವನ್ನು ನೀಡಿದರು‘.

ವಿಷಯ ಸಂಗ್ರಹಣೆ

. ಶ್ರೀ ಸಿದ್ಧಾಂತ ಶಿಖಾಮಣಿಡಾ. ಎಂ. ಶಿವಕುಮಾರ್ ಸ್ವಾಮಿ 

. ಶಿವಾಗಮಗಳು ಮತ್ತು ವಚನ ಸಾಹಿತ್ಯ ಒಂದು ವಿಮರ್ಶಾತ್ಮಕ ಅಧ್ಯಯನ 

. ವಿಶ್ವವಿಜೇತ ವಿವೇಕಾನಂದಮೈಸೂರು ರಾಮಕೃಷ್ಣ ಆಶ್ರಮ 

. ಅಷ್ಟಾವರಣ ವಿಜ್ಞಾನ 

. ವೇದಾಗಮಗಳು ಮತ್ತು ವಚನ ಸಾಹಿತ್ಯ

Someshwar Gurumath

Someshwar Gurumath is an author, filmmaker, poet, songwriter, and public speaker from Hubli, Karnataka. He has a BSc in Visual Media and is currently pursuing PG Diploma in Public leadership at the Rashtram School of Public Leadership, Rishihood University. He has published two books so far, titled Nanu Nanna Jagattu and Payanigana Kavyagalu, both of which are anthologies of his poems. Through his writings and filmmaking, he aspires to bring about a unified cultural consciousness and motivate people to work towards the renaissance of Bhārata.

0 Reviews

Related post